Wednesday 18 May 2011

'ಬೆಳಕಿನ ಆರಾಧನೆ'

ಬೆಳಕಿನ ಆರಾಧನೆ
'ಬೆಳಕಿನ ಕಡೆಗೆ' ಎಂಬುದು ಆರ್.ವಿ.ಭಂಡಾರಿಯವರು ಬರೆದ ಮಕ್ಕಳ ನಾಟಕವೊಂದರ ಹೆಸರು. ಅದು ಅವರ ಒಟ್ಟು ಸಾಹಿತ್ಯದ ಮೂಲ ಆಶಯವನ್ನು, ಅವರ ಬದುಕಿನ ಆದರ್ಶವನ್ನು ಸಮರ್ಥವಾಗಿ ಧ್ವನಿಸುವ ಪದ ಕೂಡ. ಸಾಮಾಜಿಕವಾಗಿ ಹಾಗೂ ಆಥರ್ಿಕವಾಗಿ ತೀರ ಹಿಂದುಳಿದ ವರ್ಗದಿಂದ ಬಂದ ಅವರು ತುಂಬ ಕಷ್ಟಪಟ್ಟು ಆಧುನಿಕ ವಿದ್ಯಾಭ್ಯಾಸವನ್ನು ಪಡೆದು ಮಾಸ್ತರರಾದರು. ಹಲವು ಬಗೆಯ ನೋವು ಹಾಗೂ ಅವಮಾನಗಳನ್ನು ನುಂಗಿಕೊಂಡು, ಹಟ ಹಿಡಿದು ಉತ್ನತ ವ್ಯಾಸಂಗವನ್ನು ಕೈಕೊಂಡು ವೃತ್ತಿ ಜೀವನದಲ್ಲಿ ಮೇಲೇರಿದರು. ಆದರ್ಶ ಶಿಕ್ಷಕರೆಂದು ಗೌರವವನ್ನು ಸಂಪಾದಿಸಿದರು. ಅಕ್ಷರ ಬೆಳಕಿನಲ್ಲಿ ಅವರು ಇಟ್ಟುಕೊಂಡ ಶೃದ್ಧೆಯಿಂದಾಗಿ ನಿವೃತ್ತಿಯ ನಂತರದಲ್ಲೂ ಸಾಕ್ಷರತಾ ಆಂದೋಳನದೊಂದಿಗೆ ಗುರುತಿಸಿಕೊಂಡು ಬೆಳಕು ಹರಡುವ ಕೈಂಕರ್ಯವನ್ನು ಮುಂದುವರಿಸಿದರು. 'ಚಿಂತನಉತ್ತರಕನ್ನಡ'ದಂತಹ ಹಲವು ಜನಪರ ಸಂಘಟನೆಗಳನ್ನು ಹುಟ್ಟುಹಾಕಿ, ಬೆಳಕಿನ ಪ್ರತಿಪಾದನೆಗೂ ಮುಂದಾದರು. ಅಕ್ಷರ ಬೆಳಕಿನಲ್ಲಿ ಶೃದ್ಧೆ ಹಾಗೂ ಬೆಳಕು ಹಂಚುವ ಕೈಂಕರ್ಯದಲ್ಲಿ ಉತ್ಸಾಹ- ಇವು ಸಾಹಿತ್ಯವೂ ಸೇರಿದಂತೆ ಆರ್.ವಿ. ಯವರು ಕೈಕೊಂಡ ಪ್ರತಿಯೊಂದು ಕೆಲಸದಲ್ಲೂ ಪ್ರೇರಕ ಬಿಂದುಗಳಾಗಿವೆ.
ಆರ್.ವಿ. ಯವರು ತಮ್ಮ ವ್ಯಕ್ತಿ ಜೀವನವನ್ನು ಆರಂಭಿಸಿದ ಕಾಲದ ಉತ್ತರ ಕನ್ನಡದ ಸಾಮಾಜಿಕ ಪರಿಸರದ ಮೇಲೆ ಬೆಳಕು ಚೆಲ್ಲುವ ಹಲವು ಕತೆಗಳು ಅವರ ಸಂಕಲನದಲ್ಲಿವೆ. 'ನಾನು ನನ್ನ ಕತೆಗಳಿಂದ ಬೇರೆ ಆಗಲಾರೆ' ಎನ್ನುವ ಮೂಲಕ ತಮ್ಮ ಕತೆಗಳು ಆತ್ಮ ಚರಿತ್ರಾತ್ಮಕವಾಗಿವೆ ಎಂದು ಆರ್.ವಿ. ಯವರೇ ಸೂಚಿಸಿದ್ದಿದೆ. 'ದಲಿತ ಜಾತಿಗೆ ಸೇರಿದ ಲಿಂಗಪ್ಪ ಮಾಸ್ತರು ನಮ್ಮೂರ ಶಾಲೆಗೆ ವರ್ಗವಾಗಿ ಬಂದಾಗ ಸ್ತಬ್ಧವಾಗಿದ್ದ ಕೆರೆಗೆ ಕಲ್ಲೊಗೆದಂತಾಯಿತು' ಎಂದು ಈ ಸಂಕಲನದ ಕತೆಯೊಂದು ಆರಂಭವಾಗುತ್ತದೆ. ಆ ಕೆರೆ ಸ್ತಬ್ಧವಾಗಿದ್ದದ್ದು ಜಾತಿ-ಜಾತಿಗಳ ನಡುವೆ, ಸಮಾಜದ ವಿವಿಧ ಶ್ರೇಣಿಗಳ ನಡುವೆ 'ಲಕ್ಷ್ಮಣನೆಳೆದ ರೇಖೆ' ಸ್ಪಷ್ಟವಾಗಿದ್ದುದರಿಂದಲೇ ಎಂಬ ಕಾರಣ ಮೀಮಾಂಸೆಯೂ ಕತೆಯಲ್ಲೇ ಇದೆ. ಆದರೆ ಲಿಂಗಪ್ಪನಂತಹ ದಲಿತ ಮಾಸ್ತರಾಗುವಂತಾದಾಗ, ವರ್ಗವಾಗಿ ಯಾವ ಗ್ರಾಮಕ್ಕೂ ಕಾಲಿಡಬಹುದು ಎಂತಾದಾಗ ಊರಿನ ವ್ಯಾಕರಣ ಬದಲಾಗಬೇಕಾಗುತ್ತದೆ. ಲಕ್ಷ್ಮಣರೇಖೆ ಉಲ್ಲಂಘನೆ ಆಗ್ತದೆ. ಅನಿವಾರ್ಯವಾಗಿ ಕೆರೆಯ ಸ್ತಬ್ಧತೆಗೆ ಭಂಗ ಬರ್ತದೆ. ಆರ್.ವಿ.ಯವರು ಇಟ್ಟುಕೊಂಡ ಪ್ರಗತಿಪರ ಧೋರಣೆಗಳು, ಎಡಪಂಥೀಯ ವಿಚಾರಗಳು ಹಲವು ವಿವಾದಗಳನ್ನು ಹುಟ್ಟುಹಾಕಿವೆ. ಊರಿನ ವ್ಯಾಕರಣದ ಬಗ್ಗೆ ಪ್ರಜ್ಞಾಪೂರ್ವಕವಾಗಿ ಚಿಂತಿಸುವಂತೆ ಆಹ್ವಾನಿಸಿವೆ. ಈಗ ಮೂವತ್ತು ನಲವತ್ತು ವರ್ಷಗಳೀಚೆ ಲಿಂಗಪ್ಪ ಮಾಸ್ತರಂತಹವರು ಯಾವ ಊರಿಗೆ ವರ್ಗವಾಗಿ ಬಂದರೂ ಆ ಊರಿನಲ್ಲಿ ಅವರು ಸುಲಭವಾಗಿ ಸ್ವೀಕೃತವಾಗಬಲ್ಲರು ಎಂದಾದರೆ ಊರಿನ ವ್ಯಾಕರಣದಲ್ಲೇ ಸಾಕಷ್ಟು ಬದಲಾವಣೆ ಆಗಿದೆ ಎಂದೇ ಲೆಕ್ಕ. ಇಂತಹ ಬದಲಾವಣೆಯ ಪ್ರಕೃತಿಯ ಜೊತೆ ಜೊತೆಯಲ್ಲೇ ನಡೆಯಲೇಬೇಕಾದ ವಿಚಾರ ಮಥನದಲ್ಲಿ ಆರ್.ವಿ. ಯವರ ಬರಹಗಳು ತೊಡಗಿಕೊಂಡಿವೆ ಎಂಬುದೇ ಅವರ ಹೆಚ್ಚುಗಾರಿಕೆಯಾಗಿದೆ.
ಆರ್.ವಿ.ಯವರ ಕತೆ, ಕಾದಂಬರಿ, ನಾಟಕಗಳಲ್ಲಿ ಪಾತ್ರಗಳು ಮತ್ತು ಪರಿಸರ ಕೂಡಿಯೇ ಬೆಳಕಿನ ಕಡೆಗೆ ಪಯಣ ಬೆಳೆಸುತ್ತವೆ. ಸಮಾನತೆಯ ತತ್ತ್ವವನ್ನು ಬೋಧಿಸುತ್ತವೆ, ಅಥವಾ ಅರ್ಥಮಾಡಿಕೊಳ್ಳುತ್ತವೆ. ಇದೊಂದು ದೊಡ್ಡ ಕನಸು. ಈ ಕನಸನ್ನು ನಿಜ ಜೀವನದಲ್ಲೂ ತಮ್ಮ ಜೀವಿತಾವಧಿಯಲ್ಲೇ ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ತವಕದಲ್ಲಿ ಆರ್.ವಿ.ಯವರು ಬರೆದರು. ಕಳೆದ ಮೂರು ದಶಕಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ಪತ್ರಿಕೆಗಳಲ್ಲಿ ಅವರು ನಡೆಸಿದ ವಾಗ್ವಾದಗಳು ಈ ತವಕವನ್ನು ಹಂಚಿಕೊಂಡ ರೋಚಕ ದಾಖಲೆಗಳಾಗಿವೆ.
ಆರ್.ವಿ. ಯವರು ಸಾಹಿತ್ಯ ಹಾಗೂ ಪತ್ರಿಕೆಗಳನ್ನು ತಮ್ಮ ವಿಚಾರಗಳ ಪ್ರವರ್ತನೆಗಾಗಿ ಬಳಸಿಕೊಂಡಂತೇ ಯಕ್ಷಗಾನ ಮಾಧ್ಯಮವನ್ನು ಬಳಸಿಕೊಂಡರು. ಅವರು ಸ್ವತಃ ರಚಿಸಿದ ಯಕ್ಷಗಾನ ಪ್ರಸಂಗಗಳು ಅಕ್ಷರದ ಬೆಳಕನ್ನು ಆರಾಧಿಸುತ್ತವೆ. ಭಾವಪೂರ್ಣವಾದ, ಆದರೆ ತಮ್ಮ ವೈಚಾರಿಕ ನಿಲುವಿನೊಂದಿಗೆ ಎಲ್ಲಿಯೂ ರಾಜಿ ಮಾಡಿಕೊಳ್ಳದ ವಿಶಿಷ್ಟ ಅರ್ಥಧಾರಿಗಳೆಂದೂ ಅವರು ಸಾಕಷ್ಟು ಪ್ರಸಿದ್ಧರಾದರು. ತುಂಬ ಹಿಂದೆ ಅವರು ಹೊನ್ನಾವರ ಕಾಲೇಜಿನಲ್ಲಿ ನಡೆಸಿಕೊಟ್ಟ ತಾಳಮದ್ದಲೆ ಕಾರ್ಯಕ್ರಮ ವಿವಾದಕ್ಕೆ ಕಾರಣವಾಗಿತ್ತು. ಪ್ರಸಂಗ ವಾಲಿಮೋಕ್ಷ. ಅವಧಾನಿಯವರು ಹಾಗೂ ಆರ್.ವಿ.ಯವರು ರಾಮ-ವಾಲಿ ಪಾತ್ರಗಳನ್ನು ನಿರ್ವಹಿಸಿದ್ದರು. ಆರ್.ವಿ.ಯವರು ವಾಲಿಮೋಕ್ಷವನ್ನು ವಾಲಿವಧೆಯ ಪ್ರಸಂಗವಾಗಿ ಪ್ರಸ್ತುತಪಡಿಸಿದರು. ಆ ಪ್ರಸಂಗದಲ್ಲಿ ಕೊನೆಗೂ ರಾಮ ತನ್ನಿಂದ ಒಂದು ಪ್ರಮಾದವಾಯಿತೆಂದು ವಾಲಿಯ ಕ್ಷಮೆ ಯಾಚಿಸುತ್ತಾನೆ. ರಾಮನ ಪಾತ್ರ ಹೀಗೆ ವತರ್ಿಸಬಹುದೇ ಎಂಬುದು ಆಗ ಸಾಕಷ್ಟು ದಿನ ಚಚರ್ೆಯಲ್ಲಿತ್ತು. ವಾಲ್ಮೀಕಿಯ ರಾಮ ಹೇಗೇ ವತರ್ಿಸಿದ್ದರೂ ಇದು ಆರ್.ವಿ.ಯವರ ರಾಮ, ಈತನ ನೈತಿಕತೆಯ ಚೌಕಟ್ಟು ಭಿನ್ನವಾಗಿದ್ದು ಎಂಬುದನ್ನು ಅರಗಿಸಿಕೊಳ್ಳಲು ಯಕ್ಷಗಾನ ಪ್ರಿಯರಿಗೆ ಕಷ್ಟವಾಗಿರಬೇಕು. ಆರ್.ವಿ.ಯವರು ತಮ್ಮ ಯಕ್ಷಗಾನ ಅರ್ಥಗಾರಿಕೆಲ್ಲೂ ಬರಹಗಳಲ್ಲೂ ಹೀಗೆ ಪುರಾಣ ಪ್ರತಿಮೆಗಳನ್ನು ಮುರಿದು ಹೊಸದಾಗಿ ನಿಮರ್ಿಸಲು ಹೊರಟರು. ಬೆಳಕಿನ ಕಡೆಗೆ ಸಮುದಾಯವನ್ನು ಮುನ್ನಡೆಸಲು ಇದು ಅಗತ್ಯವಾಗಿ ತುತರ್ಾಗಿ ಆಗಬೇಕಾದ ಕೆಲಸವೆಂದು ಅವರು ನಂಬಿದ್ದರು.
ಆರ್.ವಿ.ಯವರ ವಿಚಾರಗಳ ಕುರಿತು ಹೀಗೆ ಸಾಕಷ್ಟು ಚಚರ್ೆ ನಡೆದಿದ್ದರೂ ಅವರ ಕೃತಿಗಳ ಕುರಿತು ಹೆಚ್ಚಿನ ಬರಹಗಳೇನು ಬಂದಿರಲಿಲ್ಲ. ಹೀಗಾಗಿ ಅವರ ಕೃತಿಗಳನ್ನು ಅವಲೋಕಿಸುವ ಹಾಗೂ ಚಚರ್ಿಸುವ ಬರಹಗಳನ್ನೊಳಗೊಂಡಂತೆ ಅಭಿನಂದನ ಗ್ರಂಥವೊಂದನ್ನು ಪ್ರಕಟಿಸುವ ಇರಾದೆ ಚಿಂತನಕ್ಕಿತ್ತು. 'ಚಿಂತನಉತ್ತರಕನ್ನಡ'ದ ಹಿರಿಯ ಸದಸ್ಯರು, ನಾಡಿನ ಬಂಡಾಯ ಚಳುವಳಿಯ ಮುಂಚೂಣಿಯ ಬರಹಗಾರರೂ, ಇದೆಲ್ಲಕ್ಕಿಂತ ಮುಖ್ಯವಾಗಿ ಉತ್ತರ ಕನ್ನಡದ ಸಾಂಸ್ಕೃತಿಕ ಬದುಕಿನಲ್ಲಿ ಹೊಸ ಸಂಚಲನವನ್ನುಂಟುಮಾಡುವಲ್ಲಿ ಶ್ರಮಿಸಿದವರೂ ಆದ ಆರ್.ವಿ.ಯವರನ್ನು ಅಭಿನಂದಿಸುವುದು 'ಚಿಂತನಉತ್ತರಕನ್ನಡಕ್ಕೆ' ಹೆಮ್ಮೆಯ ಸಂಗತಿಯಾಗಿತ್ತು. ಆದರೆ ಆರ್.ವಿ. ಯವರು ಈ ಯೋಜನೆಗೆ ಸಮ್ಮತಿಯನ್ನೇ ನೀಡಲಿಲ್ಲ. ಹೀಗಾಗಿ ಅಭಿನಂದನ ಗ್ರಂಥದ ಯೋಜನೆಯನ್ನು ಕೈಬಿಟ್ಟು ಅವರ ಕೃತಿಗಳನ್ನು ಅನುಸಂಧಾನಿಸುವ ಹಾಗೂ ಅವರ ಕ್ರಿಯಾಶೀಲತೆಯ ವಿವಿಧ ಮುಖಗಳನ್ನು ಪರಿಚಯಿಸುವ ಬರಹಗಳನ್ನೊಳಗೊಂಡ ಈ ಹೊತ್ತಿಗೆಯನ್ನು ರೂಪಿಸಬೇಕಾಯಿತು.
ಇನ್ನೇನು ಈ ಹೊತ್ತಿಗೆ ಬಿಡುಗಡೆಗೊಳ್ಳಬೇಕು ಅನ್ನುವಾಗಲೇ ಆರ್.ವಿ. ಭಂಡಾರಿಯವರು ನಮ್ಮನ್ನಗಲಿದರು. ಇದು ಅವರಿಗೆ ಶ್ರದ್ಧಾಂಜಲಿ ಕೂಡ.
ಡಾ. ಎಂ.ಜಿ. ಹೆಗಡೆ
(ಪ್ರಕಾಶಕರ ಪರವಾಗಿ)

No comments:

Post a Comment